ಗುರುವಾರ, ಜೂನ್ 3, 2010

ಹುಟ್ಟುವಾಗಲೇ ಶಾಪವನ್ನು ಹೊತ್ತು,
ಉಪಯೋಗಿಸಿದ ವಸ್ತುವನ್ನೆ
ಮತ್ತೆ ಉಪಯೋಗಿಸುವ ಭಾಗ್ಯವ ಪಡೆದು,
ಬೆಳೆಬೆಳೆಯುತ್ತಾ
ಹೆತ್ತವರ ಪಾಲಿಗೆ ಭಾರವಾಗುತ್ತಾ....
ಎದೆಭಾರವನ್ನು ಹೊತ್ತು,
ಕಣ್ಣಲ್ಲೇ ಕನಸ್ಸು ಕಾಣುತ್ತಾ,
ತನ್ನದೇ ಆದ ಲೋಕವ ಕಟ್ಟುತ್ತಾ.....
ಪರರ ಲೋಕಕ್ಕೆ ಕಾಲಿಟ್ಟು
ಸತಿ,ಸೊಸೆಯಾಗಿ ಸೇವೆ,
ಮಾತೃವಾಗಿ ಪ್ರೀತಿ ವಾತ್ಸಲ್ಯ
ಜವಾಬ್ದಾರಿಯ ಜೀವನ......
ಸಂತತಿಯ ಸಂಕೋಲೆಯಲ್ಲಿ
ಬಾಡಿ ಬೆಂಡಾಗಿ...
ಕೊನೆಗೂ ತನ್ನದಲ್ಲದ,
ತಾನು ತಾನಾಗಿರದ ಜೀವನದ
ಜೀವವ ಸವೆಸುತ್ತಾಳೆ................

1 ಕಾಮೆಂಟ್‌:

hari ಹೇಳಿದರು...

tumba chennagide hmmmmm.... nim yajamanrugu comment madakke heli nodana en antaare anta