ಸೋಮವಾರ, ಮೇ 28, 2012

ಹೆಣ್ಣಿನ ಜೀವನ
ಹುಟ್ಟುವಾಗಲೇ ಶಾಪವನ್ನು ಹೊತ್ತು,
ಉಪಯೋಗಿಸಿದ ವಸ್ತುವನ್ನೇ
ಮತ್ತೆ ಉಪಯೋಗಿಸುವ ಭಾಗ್ಯವ ಪಡೆದು,
ಬೆಳೆ ಬೆಳೆಯುತ್ತಾ
ಹೆತ್ತವರ ಪಾಲಿಗೆ ಭಾರವಾಗುತ್ತಾ,
ಎದೆ ಭಾರವನ್ನು ಹೊತ್ತು,
ಕಣ್ಣಲ್ಲೇ ಕನಸ್ಸು ಕಾಣುತ್ತಾ
ತನ್ನದೇ ಆದ ಲೋಕವ ಕಟ್ಟುತ್ತಾ,.....
ಪರರ ಲೋಕಕ್ಕೆ ಕಾಲಿಟ್ಟು
ಸತಿ, ಸೊಸೆಯಾಗಿ ಸೇವೆ
ಮಾತೃವಾಗಿ ಪ್ರೀತಿ ವಾತ್ಸಲ್ಯ
ಜವಾಬ್ದಾರಿಯ ಜೀವನ....
ಸಂತತಿಯ ಸಂಕೋಲೆಯಲ್ಲಿ
ಬಾಡಿ ಬೆಂಡಾಗಿ....
ಕೊನೆಗೂ ತನ್ನದಲ್ಲದ,
ತಾನು ತಾನಾಗಿರದ ಜೀವನದ,
ಜೀವವ ಸವೆಸುವುದು.....

ಗುರುವಾರ, ಜುಲೈ 7, 2011


ಮಿಂಚು ಬಡಿದು
ಆಗಸ ಕಣ್ಣೀರಿಟ್ಟ ದಿನ,
ಧರೆಗೆ ಹರಿವ ನೀರಲ್ಲಿ
ಕಾಮನಬಿಲ್ಲು,
ಅದರೊಳಗೆ ಮಿಂದ
ನನ್ನ ನಲ್ಲ, ನಿನ್ನ
ಕಣ್ಣಲ್ಲಿ ಅದರ
ಪ್ರತಿಫಲನ,
ನನ್ನ ಹೃದಯದಲ್ಲಿ
ಅರಳಿದೆ ನಿನ್ನ
ಕವನ.....

ಶನಿವಾರ, ಡಿಸೆಂಬರ್ 25, 2010

ನನ್ನ ಮಗನ ನೆನಪಲ್ಲಿ......... ನನ್ನ ಬಿಟ್ಟು ಊರಿಗೆ ಹೋದಾಗ.....


ನಿನ್ನ ನೆನಪಲ್ಲೇ
ಕಣ್ಣೊದ್ದೆಯಾಗಿ,
ಸೋರಿದ ಹನಿಯನ್ನು
ಹೆಕ್ಕಿ ಕೇಳಿದೆ, ನೀನೇಕೆ
ಉದುರಿದೆ ಮುತ್ತು......?
ಪಿಸುಮಾತಲ್ಲೇ
ನುಡಿಯಿತದು......
ನನಗೆಲ್ಲಿ ಜಾಗವಿದೆ ಹೇಳು.....,
ಅಲ್ಲೆಲ್ಲ ಅವನೇ
ತುಂಬಿರುವಾಗ.........!!!

ಸೋಮವಾರ, ನವೆಂಬರ್ 1, 2010

ನಾನು ಮತ್ತು ನನ್ನ ಜೊತೆಗಾರ................

ನಿನ್ನ ಆಸೆಗೆ ಮಿತಿಯಿರಲಿ
ಎಂದು ಎಚ್ಚರಿಸುತ್ತಿದ್ದರೂ
ಮ್ಮೊಮ್ಮೆ ಮರೆತುಬಿಡುವುದು
ಏಕೆ ಈ ಮನಸ್ಸು??????
ನೆನ್ನೆ ನನ್ನದಾಗಿತ್ತು
ಇಂದು ನಿನ್ನದಾಗಿದೆ
ಸರಿದುಕೋ ಎನ್ನುವುದಾದರೂ ಹೇಗೆ??????
ವರುಷಗಳ ನಂತರವೂ
ಅದೇ ನೀನು,,,,, ಅದೇ ನಾನು
ಆದರೆ ಅಂತರದ ಮಿತಿ ಬೇರೆ..............

ಶುಕ್ರವಾರ, ಜುಲೈ 30, 2010


...................... ಪರೀಕ್ಷೆ........................
ಮೊಟ್ಟ ಮೊದಲ ಬಾರಿಗೆ ನನ್ನ ಮಗ ತನ್ನ ಶಾಲೆಯಲ್ಲಿ ಘಟಕ ಪರೀಕ್ಷೆಯನ್ನು(unit test) ಬರೆಯಲು ತಯಾರಿ ನಡೆಸುತ್ತಿದ್ದಾನೆ...
ಅವನಿಗೆ ಪರೀಕ್ಷೆಯೆಂಬುದರ ಅರ್ಥವೂ ತಿಳಿದಿಲ್ಲ ಆದರೂ ಅವನು ಈ ಪರೀಕ್ಷೆಯನ್ನು ಎದುರಿಸಲೇಬೇಕು......... ತಟ್ಟೆಗೆ ಅನ್ನ ಸಾರು ಹಾಕಿಕೊಟ್ಟರೆ ಕಲಸಿಕೊಂಡು ತಿನ್ನಲು ಬಾರದ ಮಗುವಿಗೆ ಪರೀಕ್ಷೆ..... ಅವನಿಗೆ ಇಲ್ಲ ಆತಂಕ ಆದರೆ ನಮಗೆ ಬಲು ಆತಂಕ
ಪರೀಕ್ಷೆಯಲ್ಲಿ ಬರೆಯದೇ ಇದ್ದರೆ ಎಂದಲ್ಲ ಬರೆಯದೇ ಇದ್ದಾಗ ಅವನ teacher ಬಯ್ಯುತ್ತಾರಲ್ಲಾ, ಹೊಡೆಯುತ್ತಾರಲ್ಲಾ, ಎಂಬ ಆತಂಕ.... ಮುಖ ಸಪ್ಪಗೆ ಮಾಡಿಕೊಂಡು ಮಗ ಮನೆಗೆ ಬಂದರೆ ನೋಡಲು ಬಲು ಕಷ್ಟ........................
ನಾವು ಚಿಕ್ಕವರಿದ್ದಾಗ ಇದನ್ನೆಲ್ಲಾ ಎದುರಿಸಿಯೇ ಬಂದಿದ್ದೇವೆ... ಆದರೆ ನಮ್ಮ ತಂದೆ ತಾಯಿಯು ಇಷ್ತೇ ಆತಂಕ ಪಡುತ್ತಿದ್ದರಾ...............????
ಈ ಪ್ರಶ್ನೆಯನ್ನು ನನ್ನ ತಾಯಿಯ ಬಳಿ ಕೇಳಿದರೆ ಮನೆ ತುಂಬಾ ಮಕ್ಕಳು(ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು) ಅವರ ಮಧ್ಯೇ
ನೀವೂ ಬೆಳೆದಿರಿ ನೀವು ಏನು ಓದುತಿದ್ದೀರ....? ಏನು ಬರೆಯುತ್ತಿದ್ದೀರಾ....? ಎಂಬುದೇ ನನಗೆ ತಿಳಿಯುತ್ತಿರಲಿಲ್ಲ, ಒಂದು ದಿನವೂ ಓದಿ ಎಂದು ಹೇಳುತ್ತಿರಲಿಲ್ಲ, ದೊಡ್ಡವರ(ಅಣ್ಣ,ಅಕ್ಕ) ಜೊತೆ ಹೇಳಿಸಿಕೊಂಡು ನೀವೇ ಓದುತ್ತಿದ್ರೀ........ ಇನ್ನು ಘಟಕ ಪರೀಕ್ಷೆ, ಚಿಕ್ಕ ಪರೀಕ್ಷೆ, ದೊಡ್ಡ ಪರೀಕ್ಷೆ ಯಾವಾಗ, ಏನು, ಎಂಬುದು ನಮಗೆಲ್ಲಿ ಗೊತ್ತಿರುತ್ತಿತ್ತು..... ಒಂದತೂ ಗೊತ್ತು ಚಿಕ್ಕ ಪರೀಕ್ಷೆ ಮುಗಿದ ಮೇಲೆ ದಸರ ರಜ ದೊಡ್ಡ ಪರೀಕ್ಷೆ ಮುಗಿದ ಮೇಲೆ ಬೇಸಿಗೆ ರಜ ಅವಾಗ ನಿಮ್ಮನ್ನೆಲ್ಲಾ ಕರೆದುಕೊಂಡು ಅಜ್ಜಿ ಊರಿಗೆ ಹೋಗುವ ಸಡಗರ ಅದಕ್ಕೆ ಪರೀಕ್ಷೆ ಯಾವಾಗ ಮುಗಿಯುತ್ತೆ ಅಂತ ಕಾದು ಕುಳಿರುತಿದ್ದೆ ಹೊರತು ಯಾವ ಆತಂಕನೂ ಇರಲಿಲ್ಲ....
ಇದು ನಮ್ಮ ಬಾಲ್ಯ..... ಆದರೆ ಇಂದು ಮನೆಯಲ್ಲಿ ಒಂದೊಂದೆ ಮಗು... ಅಪ್ಪ ಅಮ್ಮ ಮಗು ಅಷ್ಡೆ ಇಷ್ಡೇ ಪ್ರಪಂಚ.....ಆಟ ಆಡಲೂ ನಾವೇ ಬೇಕು, ಪಾಠ ಓದಿಸಲೂ ನಾವೇ ಬೇಕು......

ಗುರುವಾರ, ಜುಲೈ 29, 2010

  • ಮನಸ್ಸನ್ನು ಇಣುಕಿಯೂ ನೋಡದೆ,

  • ಹೆಣ್ಣನ್ನು ಇಂಚಿಚೂ ಅಳೆದು

  • ಪರೀಕ್ಷಿಸುತ್ತಾನೆ.............

  • ಅವಳ ಹಾವ ಭಂಗಿಯನ್ನು

  • ದೇಹದ ಉಬ್ಬು ತಗ್ಗುಗಳನ್ನು

  • ಕಣ್ಣಲ್ಲೇ ಸವಿಯುತ್ತಾನೆ.....

  • ತನ್ನ ಮನದ ಒಡತಿ

  • ಸಿಡುಕಿದರೆ

  • ಸಿಡಿಮಿಡಿಗೊಳ್ಳುತ್ತಾನೆ.......

  • ತನ್ನ ಮನಸ್ವೇಚ್ಚೆ

  • ನಡೆಯುತ್ತಾನೆ.............

  • ಮಾಡಿದ ತಪ್ಪಿಗೆ

  • ಕೊರಗಿದಂತ್ತಾಡುತ್ತಾನೆ........

  • ಸಮಾಜದ ಕಣ್ಣಿಗೆ!!!!!!!!!!

  • ಸಹೃದಯವಂತ ಗಂಡು......

  • ಹೃದಯವೇ ಇಲ್ಲದ ಹೆಣ್ಣು.................

ಶುಕ್ರವಾರ, ಜೂನ್ 18, 2010


ಬಾಗಿಲು ಮುಚ್ಚಿದ ಕೋಣೆಯಲ್ಲಿ,
ದಿನಗಳು ಕೊಳೆಯುತ್ತಿದೆ,
ಗಾಳಿ ಬೆಳಕು ಶಬ್ದಗಳು ಸಾಯುತ್ತಿವೆ.....
ಕತ್ತಲೆಯ ಉಸುಕಿನಲ್ಲಿ ಸಂಚಾರ ಹೂತು
ಉಸಿರು ಕೇವಲ ಉಸಿರಾಡುತ್ತಿದೆ...!
ಕಾಲುಗಳಲ್ಲಿ ಕಸವಿದೆ
ಕಣ್ಣುಗಳಲ್ಲಿ ಕನಸಿದೆ
ಎದೆ ತುಂಬಿದ ಆಸೆಗೆ
ಬಾಗಿಲಾಚೆ ಬೆಳಕಿದೆ....
ತೆರೆಯಬೇಕಿನ್ನು ಕದಗಳನ್ನು
ಆದರೆ...............
ಕತ್ತಲೆಯಲ್ಲಿ ಕಳೆದುಹೋಗಿದೆ ಬಾಗಿಲು
ಸಿಗುವುದೆಂತು...?
ಹುಡುಕಬೇಕು.....